ನಾನು ತಯಾರಾಗಿ ಅವತಿಗಾಗಿ ಕಾಯ್ತಾ ಇರೋ ಅಷ್ಟರಲ್ಲೇ ಅವನು ಬಂದ. 'ನೀನು ಗಡಿ-ಗೋಪುರ ನೋಡಿದಿಯ?' ಕೇಳಿದ, ನಾನು ನೋಡಿರಲಿಲ್ಲ. 'ಬಾ ಬೆಂಗಳೂರಿಗೆ ನಾಲ್ಕು ಗಡಿ-ಗೋಪುರಗಳಿವೆ. ನೋಡಿ ಬರೋಣ' ಅಂದ.
ಅವತಿ ಒಂದು ದಿನಪತ್ರಿಕೆಯಲ್ಲಿ ಓದಿದ ಪ್ರಕಾರ ಗಡಿ-ಗೋಪುರಗಳು ನಾಲ್ಕಿವೆ.
೧. ಲಾಲ್-ಬಾಗ್ ಒಳಗೆ
೨. ಮೇಖ್ರಿ ವೃತ್ತದ ಬಳಿ
೩. ಅಲಸೂರು ಕೆರೆಯ ಪಕ್ಕದಲ್ಲಿ
೪. ಕೆಮ್ಪಬುದ್ದಿ ಕೆರೆಯ ಬಳಿ
ಲಾಲ್-ಬಾಗ್ ಒಳಗಿನ ಗಡಿ-ಗೋಪುರ ತುಂಬಾನೆ ಹೆಸರುವಾಸಿ. ಆದಕ್ಕೆ ನಮಗೆ ಅದನ್ನ ಹುಡುಕೋದು ಅಷ್ಟೇನೂ ಕಷ್ಟ ಆಗಲಿಲ್ಲ. ಕೆಂಗಲ್ ಹನುಮಂತಯ್ಯ ರಸ್ತೆ ಕಡೆಯಿಂದ ಲಾಲ್-ಬಾಗ್ ಒಳ ಹೊಕ್ಕಾಗ, ಅಲ್ಲೇ ಎದುರಿಗೆ ಗಡಿ-ಗೋಪುರ ಕಾಣುತ್ತೆ.
![]() |
| From bengaLooru gaDi gOpuragaLu |
ಕಾವೇರಿ ಚಿತ್ರಮಂದಿರದ ಕಡೆಯಿಂದ ಮೇಖ್ರಿವೃತ್ತದ ಕಡೆ ಹೋಗುವಾಗ, ಎಡಕ್ಕೆ ಒಂದು ಉದ್ಯಾನವನ ಸಿಗತ್ತೆ. ಆ ಉದ್ಯಾನವನದ ಹೆಸರೇ 'ಕೆಂಪೇಗೌಡ ಗಡಿಗೊಪುರದ ಉದ್ಯಾನವನ'. ಅದರ ಒಳಗೆ ಒಂದು ಗಡಿ-ಗೋಪುರ ಸಿಗುತ್ತೆ. ಈ ಗಡಿ-ಗೋಪುರ ನಾಲ್ಕರಲ್ಲಿ ಅತೀ ಚೆನ್ನಾಗಿ ನೋಡ್ಕೊಂದಿರೋ ಗೋಪುರ.
![]() |
| From bengaLooru gaDi gOpuragaLu |
ಅಲಸೂರು ಕೆರೆಗೆ 'ಹಾಳೆ ಮದ್ರಾಸ್' ರಸ್ತೆಯಲ್ಲಿ ಇರೋ ದಂಡೆಯ ಮೇಲೆ ಒಂದು ಎತ್ತರ ಕಲ್ಲಿನ ಮೇಲೆ ಒಂದು ಗಡಿ-ಗೋಪುರ ಇದೆ. ಇದನ್ನ ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಇದು ಭಾರತಿಯ ಭೂಸೇನೆಯ ಜಾಗದೊಳಗೆ ಇದೆ.
![]() |
| From bengaLooru gaDi gOpuragaLu |
ಕಡೆಯ ಮತ್ತು ನೋಡಲು ಅಸಹ್ಯವಾಗುವ ರೀತಿಯಲ್ಲಿ ಇರುವ ಗಡಿ-ಗೋಪುರ ಕೆಮ್ಪಾಬುದ್ದಿ ಕೆರೆಯ ಪಕ್ಕದಲ್ಲಿದೆ. ಈ ಗಡಿ-ಗೋಪುರದ ಕಡೆ ಹೋಗಲು ಸರಿಯಾದ ದಾರಿ ಕೂಡ ಇಲ್ಲ. ಅಲ್ಲಿ ಇರೋ ಪರಿಸ್ಥಿತಿಯನ್ನ ಶಬ್ದಗಳಲ್ಲಿ ವರ್ಣಿಸೋದು ಅಸಾಧ್ಯ. ಈ ಕೆಳಗಿನ ಚಿತ್ರ ನೀವೇ ನೋಡಿ.
![]() |
| From bengaLooru gaDi gOpuragaLu |
![]() |
| From bengaLooru gaDi gOpuragaLu |
ಒಂದು ದಿನಪತ್ರಿಕೆಯಲ್ಲಿ ಬಂದ ಲೇಖನವನ್ನ ಓದಿ ನಮಗೆ ಗಡಿ-ಗೋಪುರಗಳು ಎಲ್ಲಿವೆ ಅನ್ನೋ ವಿಷಯ ತಿಳಿಯಿತು. ಬೆಂಗಳೂರಿಗೆ ಬರುವೆ ಪ್ರವಾಸಿಗರಿಗೆ ಹಾಗೂ ಹೊರಗಿನಿಂದ ಬೆಂಗಳೂರಿನಲ್ಲಿ ನೆಲೆಸಲು ಬಂದಿರುವ ಹೊಸಬರಿಗೆ ಈ ಗಡಿ-ಗೋಪುರಗಳ ಬಗ್ಗೆ ತಿಳಿಯಬೇಕೆಂದರೆ ಈ ಬಗ್ಗೆ ಸರಿಯಾದ ನಾಮ-ಪಳಕಗಳು ಬೇಕಾಗುತ್ತವೆ. ಸದ್ಯಕ್ಕೆ ಅತಿ ಸುಲಬದ ಮಾರ್ಗ ಅಂದ್ರೆ 'ಲಾಲ್-ಬಾಗ್'ನಲ್ಲಿ ಇರೋ ಗಡಿ-ಗೋಪುರದ ಬಳಿ ಒಂದು ನಾಮ-ಪಲಕ ಹಾಕುವುದು. ಮತ್ತು ಅದರಲ್ಲೇ ಉಳಿದ ಮೂರೂ ಗಡಿ-ಗೋಪುರಗಳ ಬಗ್ಗೆ ಮಾಹಿತಿ ಕೊಡುವುದು. ಸರಿಯಾದ ಮಾರ್ಗದ ಚಿತ್ರಗಳೊಂದಿಗೆ ಮಾಹಿತಿ ನೀಡಿದರೆ ಪ್ರವಾಸಿಗರೇ ಅನುಕೂಲವಾಗುತ್ತದೆ.
ಈ ಕಾರ್ಯವನ್ನ ಸರ್ಕಾರವೇ ಮಾಡಬೇಕೆಂದಿಲ್ಲ. ಯಾವುದೇ ಖಾಸಗಿ ಸಂಸ್ಥೆ ಕೂಡ ಈ ಕಾರ್ಯ ಮಾಡಬಹುದು. ನಿಮಗೆ ಆಸಕ್ತರು ತಿಳಿದಿದ್ದಲ್ಲಿ ದಯವಿಟ್ಟು ಈ ಲೇಖನವನ್ನು ಅವರಿಗೆ ಮುಟ್ಟಿಸಿ.





3 ಕಾಮೆಂಟ್ಗಳು:
ಗೌ, ನಂಗೆ ಇತ್ತೀಚೆಗೆ ಗೊತ್ತಾದ ವಿಚಾರ, ಬೆಂಗಳೂರಿನಲ್ಲಿ ಎ೦ಟು ಗಡಿಗೋಪುರಗಳ್ಳಿದ್ದವಂತೆ, ಸದ್ಯ ನಾಲ್ಕು ಅಷ್ಟೆ ಉಳಿದಿದೆ ಅಂತ. ಎನೇ ಹೇಳು, ಬ್ಲಾಗಿಂಗ್ ಚೆನಾಗೆ ಸುರು ಮಾಡಿದಿಯ
http://parisarapremi.blogspot.com/2008/08/blog-post_31.html <- this guy tells that there were 8 such watch towers
ಅಂದಹಾಗೆ ನೀವಿಬ್ರು ಹೊಗಿದ್ದು ನನ್ನ ಬೈಕ್ ಮೇಲೆ.. ನೆನ್ಪಿದೆ ತಾನೆ :D
ಗೌಡ, ಮಾಹಿತಿ ಚೆನ್ನಾಗಿದೆ. ಈ ಅಮೆರಿಕಾದಲ್ಲಿ ಕೆಂಪೇಗೌಡ ಇದ್ದಿದ್ರೆ ಅವ್ನು ಉಚ್ಚೆ ಹೊಯ್ದಿದ್ ಜಾಗಾನೂ ಪ್ರವಾಸಿ ತಾಣ ಮಾಡ್ಬಿಡ್ತಿದ್ರು. ಅಲ್ಲೆ ಸುಮಾರು trailಗಳನ್ನ ಮಾಡಿ historical trail ಅಂತ ಪ್ರಚಾರ ಮಡ್ತಿದ್ರು. ಹಂಗೆ gift shop ಇಟ್ಟು ದುಡ್ಡೂ ಮಾಡ್ತಿದ್ರು.
ನಾವು tourismನಲ್ಲಿರೊ economicsಅನ್ನ ಅರ್ಥ ಮಾಡ್ಕೊಳ್ತಿಲ್ಲ ಅನ್ಸುತ್ತೆ. ಮಾಡ್ಬೇಕು ಅಂತ ಇದ್ರೆ ಕರ್ನಾಟಕದಲ್ಲಿ ಏನೇನೋ ಮಾಡ್ಬೋದು.
ಕಾಮೆಂಟ್ ಪೋಸ್ಟ್ ಮಾಡಿ