ಭಾನುವಾರ, ಸೆಪ್ಟೆಂಬರ್ 14, 2008

ಎಣ್ಣೆ ಹೊಡೆಯದ ಒಂದು ಶನಿವಾರ



ಅಪರೂಪಕ್ಕೆ ನಮ್ಮ ದುಬೈ ಹುಡುಗ BK (read it as bundle king) ತುಂಬಾ ಬಿಡುವು ಮಾಡಿಕೊಂಡು ನೆನ್ನೆ ಮನೆಗೆ ಬಂದಿದ್ದ. ನಮಗೆ ಗೊತ್ತು ಅವನು ಸರಿಯಾಗೇ ಕೊರೀತಾನೆ ಅಂತ, ಅವನ ಹೆಸರಿಗೆ ಮೋಸ ಆಗದ ಹಾಗೆ ಸರಿ ಕೊರ್ದಾ. ಅಷ್ಟರಲ್ಲೇ ನಮ್ಮ V.P. ವಾಸು ಕೂಡ ಮನೆಗೆ ಬಂದ. ಯಾರೀಗೂ ಎಣ್ಣೆ ಹೊಡೆಯುವ ಮನಸ್ಸಿರಲಿಲ್ಲ (ನನಗೆ ಮನಸ್ಸಿತ್ತು, ಆದರೆ ಒಬ್ಬನೇ ಹೊಡಿಯೋದು ಬೇಡ ಅಂತ ಸುಮ್ನಾದೆ). ನಾನು, ಮಂಜ, ವಾಸು, BK, ಲಾಟನ್ ಊಟ ಮಾಡಿ ಮನೆಗೆ ಬಂದ್ವಿ. ವಾಸು ವಾಪಸ್ ತನ್ನ ಮನೆಗೆ ಹೋದ. ಮನೇಲಿ current ಇಲ್ಲ್ರ ಕಾರಣ ನಾವು terrace ಮೇಲೆ ಕೂತು ಮಾತಾಡ್ತಿದ್ವಿ, ಆಗ ತೇಜು ಮನೆಗೆ ಬಂದ. ಹಾಗೆ ಏನೇನೋ ಮಾತು-ಕಥೆ ನಡೀತಿತ್ತು. ಅಷ್ಟರಲ್ಲಿ ನಮ್ಮ ಮಂಜಂಗೆ ನಾನು ನೆನ್ನೆ ಸಕಲೇಶಪುರಕ್ಕೆ ಹೋಗೋ ಚೂಲಲ್ಲಿ ಇದ್ದೆ ಅನ್ನೋದು ನೆನಪಾಯ್ತು.
ನನಗಿದ್ದ ಚೂಲಿನ ವಿಷಯ ಕೇಳಿದ್ದೆ ತಡ, BK 'ಬನ್ರೋ ಎಲ್ಲಾದ್ರೂ ಹೋಗೋಣ' ಅಂದ. ನಾನು ಈ ಒಂದು ಆಮಂತ್ರಣಕ್ಕೆ ಕಾಯ್ತಿದ್ದೆ. ತಕ್ಷಣ ಹೊರಟ್ವಿ. ಎಲ್ಲಿಗೆ ಅನ್ನೋದು ನಾವು ಎಂದೂ ನಿರ್ಧಾರ ಮಾಡಲ್ಲ. ಕಾರಲ್ಲಿ ಕೂತ ಮೇಲೆ ಅದೆಲ್ಲ ಮಾತು-ಕಥೆ.
ಮೊದಲು ಮದ್ದೂರ್ ಕಾಫೀ ಡೇ ಅಂದ ನಮ್ಮ BK. ಅಲ್ಲಿಗೆ ಎಷ್ಟು ಸಾರಿ ಹೋಗಿದೀವಿ ಅನ್ನೋ ಲೆಕ್ಕಾನೆ ಇಲ್ಲದ ನಮಗೆ ಆ ಜಾಗ ತುಂಬಾ ಹಳತ್ತು ಅನ್ಸ್ತು. ಹೊಸ ಜಾಗ ಅಂದ್ರೆ ವಿಮಾನ ನಿಲ್ದಾಣ ಅಂತ ನಿರ್ಧಾರ ಮಾಡಿ ಅಲ್ಲಿಗೆ ಹೋಗೋ ಯೋಜನೆಲಿ ಕಾರ್ ಹೊರಗೆ ತೆಗ್ದೆ. ಕಾರ್ ಅಲ್ಲಿ ಇದ್ದ ಪೆಟ್ರೋಲ್ ತುಂಬ ಕಮ್ಮಿ. ಅದರಲ್ಲೂ ನಮ್ಮ ಮಂಜ ಆ ಪೆಟ್ರೋಲ್ ಬಂಕ್, ಈ ಪೆಟ್ರೋಲ್ ಬಂಕ್ ಅಂತ ಸಲಹೆ ಕೊಟ್ಟು ಸುಮಾರು ೧ ಲೀಟರ್ ಪೆಟ್ರೋಲ್ ಹಾಳು ಮಾಡಿಸಿದ. ಹೇಗೋ ಕೊನೆಗೆ ಒಂದು ಬಂಕ್ ಸಿಕ್ತು, ಅಲ್ಲಿ ಪೆಟ್ರೋಲ್ ಹಾಕ್ಸಿ ಹೊರಗೆ ಬಂದಾಗ ನನಗೆ ನೆನಪಾಗಿದ್ದು ಚನ್ನಪಟ್ಟಣದ ಬಳಿ ಇರೋ 'ಬರಿಸ್ತ'. ಹಿಂದೆ ಕೂತಿದ್ದ ಮಂಜ, ಲಟಾನ್ ಮತ್ತು BK ಗೆ ಗೊತ್ತಾಗದ ಹಗೆ ನಾನು, ತೇಜು ನಿರ್ಧಾರ ಮಾಡಿದ್ವಿ 'ಬರಿಸ್ತ' ಹೋಗುವ ಅಂತ.
'ಬರಿಸ್ತ' ಹೋಗಿ ಕೂತಿದ್ದೆ ತಡ, ಅಲ್ಲಿ ನಮ್ಮ BK ತಮ್ಮ ಸಿರೀಶ್ ಬಂದ ಅವನದೊಂದು ಗ್ಯಾಂಗ್ ಜೊತೆ. ಒಟ್ಟಾರೆ ಹತ್ತು ಜನ, ಹತ್ತೂ ಜನ ಹುಡುಗರೇ, ಕೂತು ಸಾವಿರಕ್ಕೋ ಮಿಗಿಲಾಗೋ ಅಷ್ಟು ದುಡ್ಡಿಂದು ಕಾಫೀ ಕುಡಿದ್ವಿ.
ವಾಪಸ್ ಹೊರಟಾಗ ಒಂದು ಜಾಗದಲ್ಲಿ ನಿಟ್ಟು ಫೋಟೋ ತೆಗಿಯೋಣ ಅನ್ಸ್ತು, ನನ್ನ SLR ಕ್ಯಾಮೆರಾಗೆ ಮೋಸ ಮಾಡಬಾರದಲ್ಲ ಆ ಕಾರಣಕ್ಕಾಗಿ.


ನಾವು ಈ ಫೋಟೋ ತೆಗಿತಿರ್ಬೇಕಾದ್ರೆ ಇನ್ನೊಂದು ಕಾರ್ ಅಲ್ಲಿ ಇದ್ದ ಸಿರೀಶ್ ಫೋನ್ ಮಾಡಿದ, ಅವನಿಗೆ ಮುಂದೆ ಎಲ್ಲಾದ್ರೂ ಚಹಾ ಅಂಗಡಿ ಬಳಿ ನಿಲ್ಲೋಕೆ ಹೇಳಿದ್ವಿ. ನಮಗೆ ಕಾಫೀ ಡೇ ಆಗ್ಲಿ ಬರಿಸ್ತ ಆಗ್ಲಿ, ಕುಡಿದ ಕಾಫೀ ಅರಗಬೇಕಂದ್ರೆ ಒಂದು ಕಾಕ ಅಂಗಡಿ ಚಹಾ ಬೇಕು. ನಿಲ್ಸಿ ಚಹಾ ಕುಡೀತ ಮತ್ತಷ್ಟು ಫೋಟೋ ತೆಗೆದ್ವಿ. ಹತ್ತೂ ಜನ ಇರೋ ಫೋಟೋ ಸ್ವಲ್ಪ ಚೆನ್ನಾಗಿದೆ. ಅದನ್ನ ತೋರ್ಸೋ ಸಲುವಾಗೆ ನಾನು ಈ ಇಡೀ ಬ್ಲಾಗ್ ಬರೆದದ್ದು.

ಗುರುವಾರ, ಸೆಪ್ಟೆಂಬರ್ 4, 2008

ಬೆಂಗಳೂರಿನ ಗಡಿ-ಗೋಪುರಗಳು

ಒಂದು ಭಾನುವಾರ ಇದ್ದಕ್ಕಿದ್ದ ಹಾಗೆ ನನಗೆ ಒಂದು ದೂರವಾಣಿ ಕರೆ ಬಂತು. ಅವತಿ ಕರೆ ಮಾಡಿದ್ದ. ಎತ್ಕೊತಾ ನಾನು ಕೇಳಿದೆ 'glusterfs ಅಲ್ಲಿ ಏನು ಸಮಸ್ಯೆ ಈಗ?', ಅವನು ಹೇಳಿದ 'ಸದ್ಯಕ್ಕೆ ವಿಷಯ ಅದಲ್ಲ. ನಿಂಗೆ ಏನೂ ಕೆಲಸ ಇಲ್ಲದೆ ಇದ್ರೆ ಬೇಗ ತಯಾರಾಗು, ಎಲ್ಲೋ ಹೋಗ್ಬೇಕು' ಅಂದ. ನಂಗೆ ಗಾಬರಿಯಾಯ್ತು. ಕಾರಣಗಳು: ೧. ಅವತಿ ಕರೆ ಮಾಡಲ್ಲ, glusterfs ವಿಷಯ ಇಲ್ಲದೆ ಇದ್ರೆ. ೨. ಅವತಿ ಕಾರಣ ಹೇಳದೆ ತಯಾರಾಗು ಅಂದ್ರೆ ಏನೋ ಗಂಭೀರ ಸಮಸ್ಯೆನೇ ಇರತ್ತೆ.
ನಾನು ತಯಾರಾಗಿ ಅವತಿಗಾಗಿ ಕಾಯ್ತಾ ಇರೋ ಅಷ್ಟರಲ್ಲೇ ಅವನು ಬಂದ. 'ನೀನು ಗಡಿ-ಗೋಪುರ ನೋಡಿದಿಯ?' ಕೇಳಿದ, ನಾನು ನೋಡಿರಲಿಲ್ಲ. 'ಬಾ ಬೆಂಗಳೂರಿಗೆ ನಾಲ್ಕು ಗಡಿ-ಗೋಪುರಗಳಿವೆ. ನೋಡಿ ಬರೋಣ' ಅಂದ.
ಅವತಿ ಒಂದು ದಿನಪತ್ರಿಕೆಯಲ್ಲಿ ಓದಿದ ಪ್ರಕಾರ ಗಡಿ-ಗೋಪುರಗಳು ನಾಲ್ಕಿವೆ.
೧. ಲಾಲ್-ಬಾಗ್ ಒಳಗೆ
೨. ಮೇಖ್ರಿ ವೃತ್ತದ ಬಳಿ
೩. ಅಲಸೂರು ಕೆರೆಯ ಪಕ್ಕದಲ್ಲಿ
೪. ಕೆಮ್ಪಬುದ್ದಿ ಕೆರೆಯ ಬಳಿ

ಲಾಲ್-ಬಾಗ್ ಒಳಗಿನ ಗಡಿ-ಗೋಪುರ ತುಂಬಾನೆ ಹೆಸರುವಾಸಿ. ಆದಕ್ಕೆ ನಮಗೆ ಅದನ್ನ ಹುಡುಕೋದು ಅಷ್ಟೇನೂ ಕಷ್ಟ ಆಗಲಿಲ್ಲ. ಕೆಂಗಲ್ ಹನುಮಂತಯ್ಯ ರಸ್ತೆ ಕಡೆಯಿಂದ ಲಾಲ್-ಬಾಗ್ ಒಳ ಹೊಕ್ಕಾಗ, ಅಲ್ಲೇ ಎದುರಿಗೆ ಗಡಿ-ಗೋಪುರ ಕಾಣುತ್ತೆ.
From bengaLooru gaDi gOpuragaLu


ಕಾವೇರಿ ಚಿತ್ರಮಂದಿರದ ಕಡೆಯಿಂದ ಮೇಖ್ರಿವೃತ್ತದ ಕಡೆ ಹೋಗುವಾಗ, ಎಡಕ್ಕೆ ಒಂದು ಉದ್ಯಾನವನ ಸಿಗತ್ತೆ. ಆ ಉದ್ಯಾನವನದ ಹೆಸರೇ 'ಕೆಂಪೇಗೌಡ ಗಡಿಗೊಪುರದ ಉದ್ಯಾನವನ'. ಅದರ ಒಳಗೆ ಒಂದು ಗಡಿ-ಗೋಪುರ ಸಿಗುತ್ತೆ. ಈ ಗಡಿ-ಗೋಪುರ ನಾಲ್ಕರಲ್ಲಿ ಅತೀ ಚೆನ್ನಾಗಿ ನೋಡ್ಕೊಂದಿರೋ ಗೋಪುರ.
From bengaLooru gaDi gOpuragaLu


ಅಲಸೂರು ಕೆರೆಗೆ 'ಹಾಳೆ ಮದ್ರಾಸ್' ರಸ್ತೆಯಲ್ಲಿ ಇರೋ ದಂಡೆಯ ಮೇಲೆ ಒಂದು ಎತ್ತರ ಕಲ್ಲಿನ ಮೇಲೆ ಒಂದು ಗಡಿ-ಗೋಪುರ ಇದೆ. ಇದನ್ನ ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಇದು ಭಾರತಿಯ ಭೂಸೇನೆಯ ಜಾಗದೊಳಗೆ ಇದೆ.
From bengaLooru gaDi gOpuragaLu

ಕಡೆಯ ಮತ್ತು ನೋಡಲು ಅಸಹ್ಯವಾಗುವ ರೀತಿಯಲ್ಲಿ ಇರುವ ಗಡಿ-ಗೋಪುರ ಕೆಮ್ಪಾಬುದ್ದಿ ಕೆರೆಯ ಪಕ್ಕದಲ್ಲಿದೆ. ಈ ಗಡಿ-ಗೋಪುರದ ಕಡೆ ಹೋಗಲು ಸರಿಯಾದ ದಾರಿ ಕೂಡ ಇಲ್ಲ. ಅಲ್ಲಿ ಇರೋ ಪರಿಸ್ಥಿತಿಯನ್ನ ಶಬ್ದಗಳಲ್ಲಿ ವರ್ಣಿಸೋದು ಅಸಾಧ್ಯ. ಈ ಕೆಳಗಿನ ಚಿತ್ರ ನೀವೇ ನೋಡಿ.
From bengaLooru gaDi gOpuragaLu

From bengaLooru gaDi gOpuragaLu


ಒಂದು ದಿನಪತ್ರಿಕೆಯಲ್ಲಿ ಬಂದ ಲೇಖನವನ್ನ ಓದಿ ನಮಗೆ ಗಡಿ-ಗೋಪುರಗಳು ಎಲ್ಲಿವೆ ಅನ್ನೋ ವಿಷಯ ತಿಳಿಯಿತು. ಬೆಂಗಳೂರಿಗೆ ಬರುವೆ ಪ್ರವಾಸಿಗರಿಗೆ ಹಾಗೂ ಹೊರಗಿನಿಂದ ಬೆಂಗಳೂರಿನಲ್ಲಿ ನೆಲೆಸಲು ಬಂದಿರುವ ಹೊಸಬರಿಗೆ ಗಡಿ-ಗೋಪುರಗಳ ಬಗ್ಗೆ ತಿಳಿಯಬೇಕೆಂದರೆ ಬಗ್ಗೆ ಸರಿಯಾದ ನಾಮ-ಪಳಕಗಳು ಬೇಕಾಗುತ್ತವೆ. ಸದ್ಯಕ್ಕೆ ಅತಿ ಸುಲಬದ ಮಾರ್ಗ ಅಂದ್ರೆ 'ಲಾಲ್-ಬಾಗ್'ನಲ್ಲಿ ಇರೋ ಗಡಿ-ಗೋಪುರದ ಬಳಿ ಒಂದು ನಾಮ-ಪಲಕ ಹಾಕುವುದು. ಮತ್ತು ಅದರಲ್ಲೇ ಉಳಿದ ಮೂರೂ ಗಡಿ-ಗೋಪುರಗಳ ಬಗ್ಗೆ ಮಾಹಿತಿ ಕೊಡುವುದು. ಸರಿಯಾದ ಮಾರ್ಗದ ಚಿತ್ರಗಳೊಂದಿಗೆ ಮಾಹಿತಿ ನೀಡಿದರೆ ಪ್ರವಾಸಿಗರೇ ಅನುಕೂಲವಾಗುತ್ತದೆ.
ಕಾರ್ಯವನ್ನ ಸರ್ಕಾರವೇ ಮಾಡಬೇಕೆಂದಿಲ್ಲ. ಯಾವುದೇ ಖಾಸಗಿ ಸಂಸ್ಥೆ ಕೂಡ ಕಾರ್ಯ ಮಾಡಬಹುದು. ನಿಮಗೆ ಆಸಕ್ತರು ತಿಳಿದಿದ್ದಲ್ಲಿ ದಯವಿಟ್ಟು ಲೇಖನವನ್ನು ಅವರಿಗೆ ಮುಟ್ಟಿಸಿ.